ಮೂರು ದೇವತೆಗಳ ಸುತ್ತ
ಗಂಡಿನ ಜನ್ಮದ ಬದುಕಿನ ವೃತ್ತ
ಬರೆದನಾ ಭಗವಂತ!
ಒಬ್ಬರು ಈ ಹೃದಯಕ್ಕೆ ಜೀವ ಕೊಟ್ಟವರು,
ಇನ್ನಿಬ್ಬರು ಈ ಹೃದಯಕ್ಕೆ ಇನ್ನೆರಡು ಹೃದಯ ಕೊಟ್ಟವರು.
ಒಬ್ಬರೋ ಮಾತು ಕಲಿಸಿಕೊಟ್ಟವರು,
ಇನ್ನಿಬ್ಬರೋ ಅವರ ಮುದ್ದು ಮಾತಿಂದ ನನ್ನ ಮಾತೆ ಮರೆಸಿಬಿಟ್ಟವರು.
ಒಬ್ಬರೋ ಕೈ ಹಿಡಿದು ನಡೆಸಿದವರು,
ಇನ್ನಿಬ್ಬರೋ ನನ್ನ ಕೈ ಹಿಡಿದೇ ನಡೆಯುವವರು.
ಒಬ್ಬಳೊ ಭೂತಾಯಿ,ಮಮತೆಯ ಮಹಾಮಾಯಿ.
ಇನ್ನೊಬ್ಬಳೊ ನನ್ನ ಕಟ್ಟಿಕೊಂಡು ಸಹಿಸಿಕೊಂಡ ಬಡಪಾಯಿ :),
ನನ್ನ ಬಾಳ ಹೊತ್ತಿಗೆ ಬರೆಯುತ್ತಿರುವ ಶಾಯಿ.
ಮತ್ತೊಬ್ಬಳೊ ನನ್ನ ಬದುಕಿನ ಪುಟ್ಟಹಾಯಿ,ಅವಳ ಮಾತೆ ಸಕ್ಕರೆ ಮಿಠಾಯಿ.
ಆ ಮೂರು ದೇವತೆ ಯಾರು ಗೊತ್ತೆ?
ಒಬ್ಬಳು ನನ್ನ ಜನನಿ, ಧರಣಿಯಷ್ಟು ಕರುಣಿ.
ಇನ್ನೊಬ್ಬಳು ನನ್ನ ಮನೆ ಮನದ ಯಜಮಾನಿ,ಚಿನ್ನದ ಗಣಿ.
ಮತ್ತೊಬ್ಬಳು ನನ್ನ ಮುದ್ದಿನ ಕಣ್ಮಣಿ,ಪುಟ್ ಪುಟ್ ಪುಟಾಣಿ,
ಅವಳ ತುಂಟಾಟಕ್ಕೆ ನಾನಾದೆ ಅವಳ ಮೊದಲ ಅಭಿಮಾನಿ.
ಈ ಮೂರು ದೇವತೆಗಳ ಮಡಿಲಲಿ ಗಂಡಿನ ಬದುಕು ಆನಂದಸಾಗರ.
ಆ ಸಾಗರ,ಪುಟ್ಟ ಪುಟ್ಟ ಖುಷಿಗಳ ಆಗರ.
-ವಿನಾಯಕ ಪತ್ತಾರ.
Good one Vinayak.
ReplyDelete