Saturday, November 29, 2014

ಕನ್ನಡಮ್ಮ

ಇದು ನನ್ನ ಪ್ರಥಮ ಅಕ್ಷರಾಭ್ಯಾಸ ಕನ್ನಡ ತನ್ನರಹು (ಬ್ಲಾಗ್) ಲೋಕದೊಳಗೆ. 
ಕನ್ನಡಮ್ಮನಿಗೆ ನನ್ನ ಪುಟ್ಟ ಅಳಿಲು ಸೇವೆ. 

ನಿಮ್ಮ ಮನೆಮನೆಗಳಲ್ಲಿ,ಮನಮನಗಳಲ್ಲಿ ಡಿ. ಎಸ್. ಕರ್ಕಿ ಯವರು ಹಚ್ಚಿರುವ ನಾಡದೀಪ ಯಾವಾಗಲೂ ಬೆಳಗುತ್ತಿರಲಿ ಎಂದು ಆಶಿಸುತ್ತಾ, 


ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರೆವ ತೆರೆದೇವು ಮನವ
ಎರೆದೇವು ಒಲವ ಹಿಡಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ.

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿಡಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ.

                                                                                
      - ಡಿ. ಎಸ್. ಕರ್ಕಿ


ಕರ್ಣಾನಂದ ಕನ್ನಡ

ಕನ್ನಡ ನಾಡು ನುಡಿ ಜಲ ನೆಲ ಮತ್ತು ಕನ್ನಡಿಗರ ಬಗ್ಗೆ ಮೂಡಿ ಬಂದಿರುವ ಕನ್ನಡ ಚಲನಚಿತ್ರಗಳಲ್ಲಿನ ಹಾಡುಗಳು,ಪ್ರಪಂಚದ ಯಾವ ಭಾಷೆಯ ಚಲನಚಿತ್ರಗಳಲ್ಲಿ ಬಂದಿರುವುದಿಲ್ಲವೆಂಬುದು ನನ್ನ ಅನಿಸಿಕೆ.

೫೮ ನೆಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ , ಈ ೫೮ ಕನ್ನಡ ಚಲನಚಿತ್ರ ಗೀತೆಗಳ ಪಟ್ಟಿ ನಿಮಗಾಗಿ.

ಸಂಖ್ಯೆ
ಹಾಡು
ಚಲನಚಿತ್ರ
ನಾವಾಡುವ ನುಡಿಯೆ ಕನ್ನಡ ನುಡಿ
ಗಂಧದ ಗುಡಿ
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಆಕಸ್ಮಿಕ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಕಣ್ತೆರೆದು ನೋಡು
ಜೇನಿನ ಹೊಳೆಯೋ ಹಾಲಿನ ಮಳೆಯೋ
ಚಲಿಸುವ ಮೋಡಗಳು
ಕನ್ನಡ ನಾಡಿನ ಜೀವನದಿ
ಜೀವನದಿ
ಕನ್ನಡದ ಸಿದ್ದ ಹಾಡೊದಕ್ಕೆ ಎದ್ದ
ಮೋಜುಗಾರ ಸೊಗಸುಗಾರ
ಏನೇ ಕನ್ನಡತಿ ನೀ ಯಾಕೆ ಹಿಂಗಾಡ್ತಿ
ಅಪ್ಪಾಜಿ
ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ
ನಾಗರಹಾವು
 ಕನ್ನಡ ಮಣ್ಣನು ಮರಿಬೇಡ  ಅಭಿಮಾನಿ
ಸೋಲಿಲ್ಲದ ಸರದಾರ
೧೦
ಕರುನಾಡ ತಾಯಿ ಸದಾ ಚಿನ್ಮಯಿ
ನಾನು ನನ್ನ ಹೆಂಡತಿ
೧೧
ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕತೆಯನ್ನು
ಕೃಷ್ಣ ರುಕ್ಮಿಣಿ
೧೨
ಕರುನಾಡೆ ಕೈಚಾಚಿದೆ ನೋಡೆ
ಮಲ್ಲ
೧೩
ಅಂದವೋ ಅಂದವು ಕನ್ನಡ ನಾಡು
ಮಲ್ಲಿಗೆ ಹೂವೆ
೧೪
ಎಂತಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಮಾತು ತಪ್ಪದ ಮಗ
೧೫
ಕಲ್ಲಾದರೆ ನಾನು ಬೇಲೂರಿನ ಶಿಲೆಯಲಿ ಇರುವೆ
ಸಿಂಹಾದ್ರಿಯ ಸಿಂಹ
೧೬
ವೀರ ಭೂಮಿ  ಮಣ್ಣು ಕೇಳೋ ತಮ್ಮಯ್ಯ
ದುರ್ಗದ ಹುಲಿ
೧೭
ಕನ್ನಡ ನಾಡಿನ ಕರಾವಳಿ
ಮಸಣದ ಹೂವು
೧೮
ಅರಿಶಿಣ ಕುಂಕುಮ ಶೋಭಿತೆ
ಪ್ರೇಮಿಸಂ
೧೯
ಸಿಂಪಲ್ಲಾಗ ಹೇಳ್ತಿನ ಕೇಳೆ
ಮೌರ್ಯ
೨೦
ನನ್ನ ಮಣ್ಣಿದು ಕನ್ನಡ ಮಣ್ಣು
ವೀರ ಪರಂಪರೆ
೨೧
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ
ಒಂದು ಸಿನಿಮಾ ಕತೆ
೨೨
ಕನ್ನಡಮ್ಮನ ದೇವಾಲಯ
ಬ್ರಹ್ಮಾಸ್ತ್ರ
೨೩
ಕಾವೇರಮ್ಮ ಕಾಪಾಡಮ್ಮ
ಸೋಲಿಲ್ಲದ ಸರದಾರ
೨೪
ಏನೀವಾಗಾ ನಾ ಕನ್ನಡಿಗ
ಜೈ ಲಲಿತಾ
೨೫
ರುಕ್ಕಮ್ಮ ನಾ ನೂರು ಊರು ನೋಡಿ ಬಂದೆ ರುಕ್ಕಮ್ಮ
ಸಿಪಾಯಿ
೨೬
ನಾನು ಕನ್ನಡದ ಕಂದ
.ಕೆ.47
೨೭
ನಮ್ಮವ್ವ ಕಣೋ ಕನ್ನಡ ನಮ್ಮ ಜೀವ ಕಣೋ ಕನ್ನಡ
ಪಲ್ಲಕ್ಕಿ
೨೮
ಕನ್ನಡ ನಾಡಿನ ರನ್ನದ ರತುನಾ ಕೇಳೋ ಕಥೆಯನ್ನ
ಶರವೇಗದ ಸರದಾರ
೨೯
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ವಿಜಯನಗರದ ವೀರಪುತ್ರ
೩೦
ನಾಡಚರಿತೆ ನೆನಪಿಸುವ ವೀರಗೀತೆಯ
ತಾಯಿಯ ಹೊಣೆ
೩೧
ಗಂಧವತಿ  ಪೃಥ್ವಿ ನಮ್ಮ ನೆಲ
ಜೋಕಫಾಲ್ಸ್
೩೨
ಪದ ಪದ ಕನ್ನಡ ಪದಾನೆ
ಶೈಲೂ
೩೩
ಕನ್ನಡ ಸವಿಗನ್ನಡ
ಜೈ ಲಲಿತಾ
೩೪
ನಾನು ಕನ್ನಡಿಗ ಕನ್ನಡದ ಕಾವಲಿಗ
ಬೃಂದಾವನ
೩೫
ನಿನ್ನ ತಾಯಿನೆಲವ
ಸೂಪರ್ ನನ್ನ ಮಗ
೩೬
ಕನ್ನಡದ ಕಂದ
ಅನುರಾಗದ ಅಲೆಗಳು
೩೭
ನಿಮ್ಮ ಕಡೆ ಶಿರಾ ಅಂದ್ರೆ
ಸಾಮ್ರಾಟ
೩೮
ಇದೇ ನಾಡು ಇದೇ ಭಾಷೆ
ತಿರುಗುಬಾಣ
೩೯
ಕನ್ನಡ ಯೆನೆ ಕುಣಿದಾಡುವುದೆನ್ನೆದೆಯು
ಇನ್ಸ್ಪೆಕ್ಟರ್ ವಿಕ್ರಮ
೪೦
ನಮ್ಮ ಮನೆ ಮಲ್ನಾಡು
ಯುಗ ಯುಗಗಳೇ ಸಾಗಲಿ
೪೧
ನಮ್ಮ ನಾಡು ಕರುನಾಡು
ಸೈಕೋ
೪೨
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 
ಕನ್ನಡದ ಕಂದ
೪೩
ಸಾಧನೆ ತೋರಿದ ನಿಮಗೆಲ್ಲ ಸಾವಿರ ಸಾವಿರ ಚಪ್ಪಾಳೆ
ಚಪ್ಪಾಳೆ
೪೪
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ
ಬೆಳ್ಳಿ ಕಾಲುಂಗುರ
೪೫
ಕರುನಾಡ ವೈರಮುಡಿ ಕಂಠೀರವ
ರಣಧೀರ ಕಂಠೀರವ
೪೬
ಹಿಂದುಸ್ತಾನವು ಎಂದು ಮರೆಯದ
ಅಮೃತಘಳಿಗೆ
೪೭
ಜನುಮ ನೀಡುತ್ತಾಳೆ ನಮ್ಮ ತಾಯಿ
ಬೇವು ಬೆಲ್ಲ
೪೮
   
ಹೂವು ಹಣ್ಣು
೪೯
ಅಡವಿ ದೇವಿಯ ಕಾಡು ಜನಗಳ  ಹಾಡು
ರಾಯರು ಬಂದರು ಮಾವನಮನೆಗೆ
೫೦
ಕನ್ನಡ ತಾಯಿಯ ಮಕ್ಕಳು ನಾವೆಲ್ಲ ಎಂದು ಒಂದೇ
ಶೃತಿ
೫೧
ಕನ್ನಡದ ಕುಲದೇವಿ ಕಾಪಾಡು
ಸ್ಕೂಲ್ ಮಾಸ್ಟರ್
೫೨
ಎದ್ದೇಳು ಎದ್ದೇಳು
ಸರ್ವರ್ ಸೋಮಣ್ಣ
೫೩
ಕನ್ನಡದ ಮಾತು ಚೆನ್ನ
ಸಮರ
೫೪
ಕನ್ನಡಕ್ಕಾಗಿ ಜನನ
ಅಣ್ಣಾವ್ರು
೫೫
ಕನ್ನಡ ಗಂಗೇಯಲಿ
ಶೃಂಗಾರ ಕಾವ್ಯ
೫೬
ನಾನಿರುವುದೆ ನಿಮಗಾಗಿ
ಮಯೂರ
೫೭
ತಾಯೆ ಬಾರ ಮೊಗವ
ಕುಲವಧು
೫೮
 ದೇಶ ಚೆನ್ನ  ಮಣ್ಣು ಚಿನ್ನ
ಕಾವೇರಿ